Widgets Magazine

ಹೊಸ ದಾಖಲೆ ಮಾಡಿದ ಜೊತೆ ಜೊತೆಯಲಿ ಧಾರವಾಹಿ: ಖುಷಿ ವಿಚಾರ ಹಂಚಿಕೊಂಡ ಆರ್ಯವರ್ಧನ್

ಬೆಂಗಳೂರು| Krishnaveni K| Last Modified ಶುಕ್ರವಾರ, 22 ನವೆಂಬರ್ 2019 (09:07 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸದ್ಯದ ಮಟ್ಟಿಗೆ ಕಿರುತೆರೆ ಇತಿಹಾಸದಲ್ಲೇ ಹೊಸ ಟ್ರೆಂಡ್, ದಾಖಲೆ ಸೃಷ್ಟಿಸಿರುವ ಧಾರವಾಹಿ.

 
ಆರಂಭವಾದ ಮೊದಲ ವಾರದಲ್ಲೇ ಇದುವರೆಗೆ ಯಾವ ಧಾರವಾಹಿಯೂ ಪಡೆಯದಷ್ಟು ಟಿಆರ್ ಪಿ ಪಡೆದುಕೊಂಡು ಇಂದಿಗೂ ಅದನ್ನೇ ಕಾಯ್ದುಕೊಂಡು ಬರುತ್ತಿರುವುದು ಈ ಧಾರವಾಹಿಯ ಸ್ಪೆಷಾಲಿಟಿ. ಅರೂರ್ ಜಗದೀಶ್ ನಿರ್ದೇಶನದ ಧಾರವಾಹಿಯಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಅವರು ಆರ್ಯವರ್ಧನ್ ಆಗಿ ಮಿಂಚುತ್ತಿದ್ದರೆ, ಅವರಿಗೆ ಜೋಡಿಯಾಗಿ ಅನು ಪಾತ್ರಧಾರಿಯೂ ಪ್ರೇಕ್ಷಕರಿಗೆ ಅಚ್ಚುಮೆಚ್ಚು.
 
ಒಟ್ಟಿನಲ್ಲಿ ಒಂದು ಮಧ್ಯಮ ವರ್ಗದ ಸಂಸಾರ ಮತ್ತು ಶ್ರೀಮಂತ ಸಂಸಾರದಲ್ಲಿ ನಡೆಯುವ ದೃಶ್ಯಾವಳಿಗಳನ್ನು ನೈಜವೇನೋ ಎಂಬಂತೆ ತೋರಿಸುತ್ತಿರುವುದು ಈ ಧಾರವಾಹಿಯ ಪ್ಲಸ್ ಪಾಯಿಂಟ್. ಇದೀಗ ಈ ಧಾರವಾಹಿ ತನ್ನದೇ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದ್ದೆ.
 
ಆರಂಭದಲ್ಲಿಯೇ 11.5 ಟಿಆರ್ ಪಿ ಪಡೆದಿದ್ದ ಜೊತೆ ಜೊತೆಯಲಿ ಬಳಿಕ 13.5 ಕ್ಕೆ ಟಿಆರ್ ಪಿ ಪಡೆದುಕೊಂಡಿತ್ತು. ಈ ವಾರ ಅದನ್ನೂ ಮೀರಿ 15.2 ಟಿಆರ್ ಪಿ ಅಂಕ ಪಡೆದು ಹೊಸ ದಾಖಲೆಯನ್ನೇ ಮಾಡಿದೆ. ಈ ವಿಚಾರವನ್ನು ಖುಷಿಯಿಂದಲೇ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿರುವ ನಟ ಅನಿರುದ್ಧ್ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :