ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಇದೀಗ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಹಿರಿತೆರೆಯಲ್ಲಿ ಇತ್ತೀಚೆಗೆ ಅಷ್ಟೇನೂ ಯಶಸ್ಸು ಪಡೆಯದ ಅನಿರುದ್ಧ್ ಈಗ ಜೀ ಕನ್ನಡ ವಾಹಿನಿಯ ಹೊಸ ಧಾರವಾಹಿಯೊಂದಕ್ಕೆ ನಾಯಕರಾಗುತ್ತಿದ್ದಾರೆ.ಜೋಡಿಹಕ್ಕಿ ಧಾರವಾಹಿ ಖ್ಯಾತಿಯ ನಿರ್ದೇಶಕ ಆರೂರು ಜಗದೀಶ್ ಜೊತೆ ಜೊತೆಯಲಿ ಎಂಬ ಹೊಸ ಧಾರವಾಹಿ ನಿರ್ಮಿಸುತ್ತಿದ್ದು, ಅದಕ್ಕೆ ಅನಿರುದ್ಧ್ ನಾಯಕರಾಗಿದ್ದಾರೆ.ಮಧ್ಯ ವಯಸ್ಕ ಯಶಸ್ವಿ ಉದ್ಯಮಿಯ ಪಾತ್ರವನ್ನು ಅನಿರುದ್ಧ್ ನಿರ್ವಹಿಸುತ್ತಿದ್ದಾರೆ. ಇವರಿಗೆ ಚಿಕ್ಕ ವಯಸ್ಸಿನ ಹುಡುಗಿ ಹೇಗೆ ಜೊತೆಯಾಗುತ್ತಾಳೆ ಎನ್ನುವುದೇ