ಬೆಂಗಳೂರು: ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಹಲವು ಸಿನಿಮಾ ಚಾನೆಲ್ ಗಳಿವೆ. ಅದಕ್ಕೆ ಮತ್ತೊಂದು ಸೇರ್ಪಡೆಯಾಗಿ ಸಿರಿಗನ್ನಡ ಎಂಬ ಹೊಸ ವಾಹಿನಿ ಬರಲಿದೆ.ಉದಯ ಮೂವೀಸ್, ಕಲರ್ಸ್ ಕನ್ನಡ ಮೂವೀಸ್, ಪಬ್ಲಿಕ್ ಮೂವೀಸ್ ನಂತಹ ವಾಹಿನಿಯ ಸಾಲಿಗೆ ಈ ಚಾನೆಲ್ ಕೂಡಾ ಸೇರ್ಪಡೆಯಾಗಲಿದೆ. ಆದರೆ ಕೆಲವೊಂದು ಹೊಸ ಕಾರ್ಯಕ್ರಮಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.ಕೇವಲ ಸಿನಿಮಾ ಮಾತ್ರವಲ್ಲದೆ, ಸಿನಿಮಾ ನಟರ ಸಂದರ್ಶನಗಳು, ಅವರ ಅಡುಗೆ ಶೋ ಇತ್ಯಾದಿ ಕೆಲವು ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.