ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಅಶಿತಾ ಚಂದ್ರಪ್ಪ ತೆಲುಗು ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ಕನ್ನಡಾಭಿಮಾನ ಇಲ್ವಾ ಎಂದು ಟ್ರೋಲ್ ಮಾಡಿದ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಅಶಿತಾ ನನ್ನ ಕನ್ನಡಾಭಿಮಾನವನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದಾಳೆ ಎಂಬುದನ್ನು ನೆನಪಲ್ಲಿಟ್ಟುಕೊಂಡು ಪ್ರತಿಕ್ರಿಯಿಸಿ. ನಾನು ಯಾವ ಸಿನಿಮಾ ನೋಡಬೇಕೆಂದು ನಿರ್ಧರಿಸುವ ಹಕ್ಕು ನನಗಿದೆ. ಅಷ್ಟಕ್ಕೂ