ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಸಾಕಷ್ಟು ವಿವಾದ, ರಗಳೆಗಳಿಂದಲೇ ಸುದ್ದಿಯಾಗುತ್ತಿದೆ. ಅದರಲ್ಲೂ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ನಡುವಿನ ಸ್ನೇಹ-ಕಲಹ ಭಾರೀ ಸುದ್ದಿಯಾಗುತ್ತಿದೆ.ಈ ವಾರ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳಾಗಿ ಮಾಡಿ ಸವಾಲು ನೀಡುವ ಮತ್ತು ನೀಡಿದ ಸವಾಲನ್ನು ಪೂರ್ತಿ ಮಾಡುವ ಟಾಸ್ಕ್ ನೀಡಲಾಗಿದೆ. ಅದರಂತೆ ನಿನ್ನೆ ಮನೆಯಲ್ಲಿ ಸಂಗೀತಾ ಎದುರಾಳಿ ತಂಡದ ಕಾರ್ತಿಕ್ ಮತ್ತು ಸಂತೋ಼ಷ್ ಗೆ ತಲೆ ಕೂದಲು ಬೋಳಿಸಲು ಸವಾಲು ನೀಡಿದ್ದರು.