ಬಿಬಿಕೆ7: ಜೈಜಗದೀಶ್ ಕಾಲಿಗೆ ಬಿದ್ದು ಕ್ಷಮೆ ಕೇಳಿದರೂ ಭೂಮಿ ಶೆಟ್ಟಿ ಡವ್ ರಾಣಿ ಅಂದ್ರು ಜನ!

ಬೆಂಗಳೂರು| Krishnaveni K| Last Modified ಸೋಮವಾರ, 18 ನವೆಂಬರ್ 2019 (08:43 IST)
ಬೆಂಗಳೂರು: ರಿಯಾಲಿಟಿ ಶೋನಲ್ಲಿ ಈ ವಾರ ಲಕ್ಷುರಿ ಬಜೆಟ್ ಟಾಸ್ಕ್ ಸಂದರ್ಭ ಕಿತ್ತಳೆ ಹಣ್ಣನ್ನು ರಕ್ಷಿಸುವಾಗ ಜೈ ಜಗದೀಶ್ ನನ್ನ ಟಿ ಶರ್ಟ್ ಎಳೆದರು ಎಂದು ಆರೋಪಿಸಿದ್ದ ಭೂಮಿ ಶೆಟ್ಟಿ ಕೊನೆಗೆ ಈ ವಿಚಾರವಾಗಿ ಹಿರಿಯ ನಟನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದರು.

 
ಈ ಬಗ್ಗೆ ಜೈ ಜಗದೀಶ್ ಬೇಸರದಿಂದಲೇ ಪ್ರಸ್ತಾಪಿಸಿದ್ದರು. ನನಗೆ ನಿನ್ನ ವಯಸ್ಸಿನ ಮಕ್ಕಳಿದ್ದಾರೆ. ಇಂತಹ ಆರೋಪ ನನ್ನ ಮೇಲೆ ಬೇಕಿರಲಿಲ್ಲ. ನನಗೆ ಅಂತಹ ಉದ್ದೇಶವೂ ಇರಲಿಲ್ಲ. ಇದನ್ನೆಲ್ಲಾ ನೋಡಿದರೆ ಒಮ್ಮೆ ಹೊರಗೆ ಹೋದರೆ ಸಾಕೆನಿಸುತ್ತದೆ ಎಂದಿದ್ದರು.
 
ಆದರೆ ಎಲಿಮಿನೇಷನ್ ಪ್ರಕ್ರಿಯೆಗೆ ಮೊದಲು ಭೂಮಿ ಶೆಟ್ಟಿ ಈ ವಿಚಾರವಾಗಿ ವಾಸುಕಿ ವೈಭವ್ ಮಧ್ಯಸ್ಥಿಕೆಯಲ್ಲಿ ಜೈ ಜಗದೀಶ್ ಕಾಲಿಗೆ ಬಿದ್ದು ಅತ್ತು ಕರೆದು ಕ್ಷಮಾಪಣೆ ಕೇಳಿದ್ದರು. ಇದಕ್ಕೆ ಜೈ ಜಗದೀಶ್ ಕೂಡಾ ಆಕೆಯನ್ನು ಸಮಾಧಾನಿಸಿದ್ದರು.
 
ಆದರೆ ಇದನ್ನು ನೋಡಿದ ನೆಟ್ಟಿಗರು ಮಾತ್ರ ಎಲಿಮಿನೇಟ್ ಆದರೆ ಎಂಬ ಭಯದಲ್ಲಿ ಭೂಮಿ ಶೆಟ್ಟಿ ಡವ್ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭೂಮಿ ಶೆಟ್ಟಿಯದ್ದು ನಾಟಕ ಎಂದು ಜರೆದಿದ್ದಾರೆ. ಅದೇನೇ ಇರಲಿ, ಈ ವಾರ ಜೈಜಗದೀಶ್ ಅವರೇ ಎಲಿಮಿನೇಟ್ ಆದರು.
ಇದರಲ್ಲಿ ಇನ್ನಷ್ಟು ಓದಿ :