ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸಪ್ ಸಾಂಗ್ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಅದರ ಸಿಗ್ನೇಚರ್ ಸ್ಟೆಪ್ ಈಗ ವೈರಲ್ ಆಗಿದೆ. ಆದರೆ ಬಿಗ್ ಬಾಸ್ ಮನೆಯೊಳಗಿರುವ ಸದಸ್ಯರಿಗೆ ಇದರ ಬಗ್ಗೆ ಗೊತ್ತಿರಲು ಸಾಧ್ಯವಿಲ್ಲ.ಹಾಗಿದ್ದರೂ ಸ್ಪರ್ಧಿ ಚಂದನ್ ಆಚಾರ್ ನಿನ್ನೆ ದಿನ ಬೆಳಿಗ್ಗೆ ಹ್ಯಾಂಡ್ಸಪ್ ಹಾಡು ಹಾಕಿದಾಗ ಆ ಹಾಡಿನಲ್ಲಿರುವ ಸ್ಟೆಪ್ ಹಾಕಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ದರೆ ಮನೆಯೊಳಗಿದ್ದ ಚಂದನ್ ಗೆ ಈ ಹಾಡು ತೋರಿಸಿದ್ದು ಯಾರು?