ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಇಂದು ವಾರಂತ್ಯದ ಮಾತುಕತೆಯಲ್ಲಿ ಮನೆಯ ಸದಸ್ಯರಿಗೆ ಎದೆ ಢವ ಢವ ಎನಿಸುವ ಕ್ಷಣ ಎದುರಾಗಲಿದೆ.ಯಾಕೆಂದರೆ ಈ ವಾರ ಮನೆಯಿಂದ ಇಬ್ಬರು ಸದಸ್ಯರು ಎಲಿಮಿನೇಟ್ ಆಗಲಿದ್ದಾರೆ ಎಂದು ಈ ಮೊದಲೇ ಕಿಚ್ಚ ಸುದೀಪ್ ಹೇಳಿದ್ದರು. ಅದರಂತೆ ಈ ವಾರ ಮನೆಯಿಂದ ಯಾವ ಇಬ್ಬರು ಸದಸ್ಯರು ಹೊರಹೋಗಬಹುದು ಎಂಬ ಕುತೂಹಲ ಮೂಡಿದೆ.ಈ ವಾರದ ಟಾಸ್ಕ್ ವಿಚಾರದಲ್ಲಿ ವಾಸುಕಿ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.