ಬಿಗ್ ಬಾಸ್ ಕನ್ನಡ: ಒಂದೇ ದಿನಕ್ಕೆ ವೀಕ್ಷಕರ ಕೆಂಗಣ್ಣಿಗೆ ಗುರಿಯಾದ ವಾಸುಕಿ ವೈಭವ್

ಬೆಂಗಳೂರು| Krishnaveni K| Last Modified ಬುಧವಾರ, 20 ನವೆಂಬರ್ 2019 (10:04 IST)
ಬೆಂಗಳೂರು: ಇಷ್ಟು ದಿನ ವೀಕ್ಷಕರ ಮೆಚ್ಚುಗೆಯ ಸ್ಪರ್ಧಿಯಾಗಿದ್ದ ವಾಸುಕಿ ವೈಭವ್ ನಿನ್ನೆ ನಡೆದ ಟಾಸ್ಕ್ ನಲ್ಲಿ ನಡೆದುಕೊಂಡ ರೀತಿಯಿಂದ ಅಸಹನೆಗೆ ಗುರಿಯಾಗಿದ್ದಾರೆ.

 
ವಾಸುಕಿ ವೈಭವ್ ಬಿಗ್ ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿ ಎಂದೇ ಹೇಳಾಗುತ್ತಿದೆ. ಆದರೆ ನಿನ್ನೆಯ ಟಾಸ್ಕ್ ವೇಳೆ ಅವರನ್ನು ಜೈಲ್ ಗೆ ತಳ್ಳಿದಾಗ ಪೊಲೀಸ್ ವೇಷದಲ್ಲಿದ್ದ ಚಂದನ್ ಆಚಾರ್ ಲಾಠಿಯಿಂದ ಮುಟ್ಟಿದ್ದಕ್ಕೇ ತಿವಿದ ಎನ್ನುವಂತೆ ವಿಪರೀತ ನೋವಾದಂತೆ ನಟಿಸಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ.
 
ಈ ವಿಚಾರವಾಗಿ ವಾಗ್ವಾದವೂ ನಡೆಯಿತು. ಆದರೆ ವೀಕ್ಷಕರು ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಡವ್ ರಾಜ, ಇಷ್ಟು ದಿನ ವಾಸುಕಿ ಮೇಲೆ ತುಂಬಾ ಭರವಸೆಯಿತ್ತು. ಆದರೆ ನಿನ್ನೆ ಅವರ ವರ್ತನೆ ತೀರಾ ಬೇಸರ ತಂದಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :