ಬಿಗ್ ಬಾಸ್ ಕನ್ನಡ: ವಾಟಾಳ್ ನಾಗರಾಜ್ ಆಗಿ ಬದಲಾದ ಹರೀಶ್ ರಾಜ್!

ಬೆಂಗಳೂರು| Krishnaveni K| Last Modified ಬುಧವಾರ, 20 ನವೆಂಬರ್ 2019 (09:55 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಳ್ಳ, ಪೊಲೀಸ್ ಮತ್ತು ರಾಜಕಾರಣಿಗಳ ನಡುವಿನ ಹೋರಾಟದ ಟಾಸ್ಕ್ ನಡೆಯುತ್ತಿದೆ. ಈ ಟಾಸ್ಕ್ ನಲ್ಲಿ ಹೋರಾಟಗಾರನ ವೇಷ ತೊಟ್ಟಿರುವ ಹರೀಶ್ ರಾಜ್ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 
ಹೋರಾಟಗಾರನಾಗಿ ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡ್ತೀನಿ, ಧರಣಿ ಕೂರ್ತೀನಿ ಎನ್ನುತ್ತಾ ಪಕ್ಕಾ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಧ್ವನಿ ಅನುಕರಿಸುತ್ತಿರುವ ಹರೀಶ್ ರಾಜ್ ನೋಡಿ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ವಾಟಾಳ್ ನಾಗರಾಜ್ ಅವರೇ ಇದ್ದಾರೇನೋ ಎನ್ನುವಷ್ಟರ ಮಟ್ಟಿಗೆ ಹರೀಶ್ ಅವರ ಧ್ವನಿ ಅನುಕರಿಸುತ್ತಿದ್ದಾರೆ.
 
ಈ ವಾರದ ಟಾಸ್ಕ್ ನಲ್ಲಿ ಅತೀ ಹೆಚ್ಚು ಗಮನ ಸೆಳೆಯುತ್ತಿರುವ ಹರೀಶ್ ರನ್ನು ವೀಕ್ಷಕರು ವಾಟಾಳ್ ಹರೀಶ್ ಎಂದು ಕರೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :