ಬಿಗ್ ಬಾಸ್ ಕನ್ನಡ: ಕಿಶನ್ ದೀಪಿಕಾರನ್ನು ತಬ್ಬಿಕೊಂಡಿದ್ದಕ್ಕೆ ಮನೆಯವರಿಗೆಲ್ಲಾ ಶಿಕ್ಷೆ!

ಬೆಂಗಳೂರು| Krishnaveni K| Last Modified ಮಂಗಳವಾರ, 19 ನವೆಂಬರ್ 2019 (10:54 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದ ಚಟುವಟಿಕೆಯಲ್ಲಿ ದೀಪಿಕಾ ದಾಸ್ ಮತ್ತು ಕಿಶನ್ ಮಾಡಿದ ಎಡವಟ್ಟಿನಿಂದ ಈಗ ಇಬ್ಬರೂ ಶಿಕ್ಷೆಯ ಭೀತಿಯಲ್ಲಿದ್ದಾರೆ.

 
ಬಿಗ್ ಬಾಸ್ ನಿನ್ನೆ ಮನೆಯ ಸದಸ್ಯರಿಗೆ ಚಕ್ರವ್ಯೂಹ ಎನ್ನುವ ಟಾಸ್ಕ್ ನೀಡಿದ್ದರು. ಅದರಂತೆ ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿದ್ದ ಚಕ್ರ ತಿರುಗಿಸಿದಾಗ ಯಾರ ಹೆಸರು ಬರುತ್ತದೋ ಅವರು ಮನೆಯ ಇತರ ಸದಸ್ಯರು ಹೇಳಿದ ಕೆಲಸ ಮಾಡಬೇಕಿತ್ತು.
 
ಅದರಂತೆ ದೀಪಿಕಾ ಹೆಸರು ಬಂದಾಗ ಅವರಿಗೆ ಸೆಕ್ಸಿ ಟೀಚರ್ ಆಗಬೇಕೆಂದು ಟಾಸ್ಕ್ ನೀಡಿದರು. ಅದರಂತೆ ದೀಪಿಕಾ ಆಡುತ್ತಿರುವಾಗ ಅವರನ್ನು ತಬ್ಬಿಕೊಂಡ ಕಿಶನ್ ಸ್ವಿಮ್ಮಿಂಗ್ ಪೂಲ್ ಗೆ ತಳ್ಳಿದರು. ಅನಿರೀಕ್ಷಿತವಾಗಿ ಕಿಶನ್ ತಳ್ಳಿದ್ದರಿಂದ ದೀಪಿಕಾ ಮೈಕ್ ತೆಗೆದಿರಲಿಲ್ಲ. ನೀರಿಗೆ ಬಿದ್ದಿದ್ದರಿಂದ ಮೈಕ್ ಹಾಳಾಯಿತು. ಇದಕ್ಕಾಗಿ ಇಡೀ ಮನೆಯವರಿಗೆ ಬಿಗ್ ಬಾಸ್ ಸಕ್ಕರೆ ಹಿಂತೆಗೆದುಕೊಂಡು ಶಿಕ್ಷೆ ನೀಡಿದ್ದಾರೆ.
 
ಈ ಘಟನೆಯಿಂದ ಬೇಸರಗೊಂಡ ಕಿಶನ್ ಬಿಗ್ ಬಾಸ್ ಬಳಿಕ ಕ್ಷಮೆ ಯಾಚಿಸಿದ್ದಾರೆ. ಏನೇ ಶಿಕ್ಷೆಯಿದ್ದರೂ ನನಗೆ ಕೊಡಿ. ಇದು ನನ್ನ ಒಬ್ಬನಿಂದ ಆದ ತಪ್ಪು. ದಯವಿಟ್ಟು ಕ್ಷಮಿಸಿ ಎಂದು ಕ್ಷಮೆ ಕೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :