ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಸುಜಾತ. ನಿನ್ನೆ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಎಲಿಮಿನೇಟ್ ಆದ ಸ್ಪರ್ಧಿಯ ಹೆಸರು ಬಹಿರಂಗಪಡಿಸಿದರು. ಕಾಲಿಗೆ ಏಟು ಬಿದ್ದ ಬಳಿಕ ಸುಜಾತ ಟಾಸ್ಕ್ ಗಳಲ್ಲಿ ಅಷ್ಟೊಂದು ಕ್ರಿಯಾಶೀಲರಾಗಿರಲಿಲ್ಲ. ಅದಲ್ಲದೆ, ಅವರ ಕೆಲವೊಂದು ವರ್ತನೆಗಳು ವೀಕ್ಷಕರಿಗೆ ಇಷ್ಟವಾಗುತ್ತಿರಲಿಲ್ಲ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಲೇ ಇದ್ದರು.ಇದೀಗ ಸುಜಾತ ಮನೆಯಿಂದ ಹೊರಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ