ಬಿಗ್ ಬಾಸ್ ಕನ್ನಡ 8: ಈ ವಾರ ಎಲಿಮಿನೇಟ್ ಆದವರು ಇವರೇ?

ಬೆಂಗಳೂರು| Krishnaveni K| Last Modified ಭಾನುವಾರ, 25 ಜುಲೈ 2021 (11:13 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಎಲಿಮಿನೇಟ್ ಆದವರ ಬಗ್ಗೆ ಹಲವು ಅನುಮಾನ ಕಾಡಿದೆ.  
> ಈ ವಾರ ಮನೆಯಿಂದ ಹೊರಹೋಗಲು ಚಕ್ರವರ್ತಿ ಚಂದ್ರಚೂಡ್, ಶಮಂತ್, ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಮತ್ತು ಶುಭಾ ಪೂಂಜಾ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಯಾರು ಹೊರಹೋದರೂ ಬಿಗ್ ವಿಕೆಟ್ ಒಂದು ಬೀಳುವುದು ಗ್ಯಾರಂಟಿ.>   ಈಗಾಗಲೇ ಚಕ್ರವರ್ತಿ ಚಂದ್ರಚೂಡ್ ಈ ವಾರ ಮನೆಯಿಂದ ಹೊರಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದೆಡೆ ನಿನ್ನೆಯ ಶೂಟಿಂಗ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಶಮಂತ್ ಇಲ್ಲದೇ ಇರುವುದರಿಂದ ಅವರೇ ಎಲಿಮಿನೇಟ್ ಆಗಿರಬಹುದೇ ಎಂಬ ಅನುಮಾನವೂ ಇದೆ. ಎಲ್ಲದಕ್ಕೂ ಇಂದು ಉತ್ತರ ಸಿಗಲಿದೆ.ಇದರಲ್ಲಿ ಇನ್ನಷ್ಟು ಓದಿ :