ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಐದನೇ ವಾರದ ಅಂತ್ಯಕ್ಕೆ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಯ ಎಂಟ್ರಿಯಾಗಿದೆ. ಅವರೇ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ. ಈ ಹೆಸರು ಸಿನಿಮಾ ಪ್ರಿಯರಿಗೆ ಚಿರಪರಿಚಿತ. ಯಾಕೆಂದರೆ ಹಿಂದೊಮ್ಮೆ ನಟಿ ಶ್ರುತಿ ಜೊತೆಗೆ ಎರಡನೇ ಮದುವೆ ಮಾಡಿಕೊಂಡು ಭಾರೀ ವಿವಾದ ಸೃಷ್ಟಿಸಿದ್ದವರು. ವಿಶೇಷವೆಂದರೆ ಇವರು ಇನ್ನೊಬ್ಬ ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರ ಸ್ನೇಹಿತರಂತೆ.ಹೀಗಾಗಿ ಚಂದ್ರಚೂಡ ಆಗಮನ ಪ್ರಶಾಂತ್ ಮುಖದಲ್ಲಿ ನಗು ತರಿಸಿದೆ.