Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿಯಾಗಿರುವ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಬಗ್ಗೆ ಈಗ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ.ನಿನ್ನೆ ಮನೆಯಲ್ಲಿ ಪ್ರಶಾಂತ್ ಸಂಬರಗಿ ಈ ವಿಚಾರವನ್ನು ಹೊರಹಾಕಿದ್ದಾರೆ. ರೂಪೇಶ್ ರಾಜಣ್ಣಗೆ ಒಂದು ಕಿವಿ ಕೇಳಿಸಲ್ಲ. ಅದಕ್ಕೇ ಕೆಲವು ಸಂವಹನ ಕೊರತೆಯಾಗುತ್ತಿದೆ ಎಂದು ಪ್ರಶಾಂತ್ ಸಂಬರಗಿ ದಿವ್ಯಾ ಉರುಡುಗ ಬಳಿ ಹೇಳಿದ್ದಾರೆ. ಆದರೆ ಇದನ್ನು ನಂಬದ ದಿವ್ಯಾ ಸುಳ್ಳು ಹೇಳಬೇಡಿ ಎಂದಿದ್ದಾರೆ.