ಭೂಮಿ ಶೆಟ್ಟಿಗೆ ಶಾಕ್ ಕೊಟ್ಟ ಬಿಗ್ ಬಾಸ್

ಬೆಂಗಳೂರು| Krishnaveni K| Last Modified ಶನಿವಾರ, 14 ಡಿಸೆಂಬರ್ 2019 (09:58 IST)
ಬೆಂಗಳೂರು: ಭೂಮಿ ಶೆಟ್ಟಿಗೆ ನಿಜಕ್ಕೂ ಬಿಗ್ ಬಾಸ್ ನಿನ್ನೆ ಸಖತ್ ಶಾಕ್ ಕೊಟ್ಟರು. ನಾಲ್ಕು ವರ್ಷಗಳಿಂದ ಯಾವುದೋ ಕಾರಣಕ್ಕೆ ಬೇರೆಯಾಗಿದ್ದ ಮಾವ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ನಿಜಕ್ಕೂ ಶಾಕಿಂಗ್ ಆಗಿತ್ತು.
 

ಯಾರಿಗಾದರೂ ಸಾರಿ ಕೇಳುವುದಕ್ಕೆ ಬಿಗ್ ಬಾಸ್ ಹಿಂದೊಮ್ಮೆ ವೇದಿಕೆ ಕೊಟ್ಟಾಗ ಭೂಮಿ ಶೆಟ್ಟಿ ನಾಲ್ಕು ವರ್ಷಗಳಿಂದ ಯಾವುದೋ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದು ಮಾತೇ ಆಡಿಲ್ಲ ಎಂದು ಸಾರಿ ಕೇಳಿದ್ದರು. ಅದೇ ಮಾವ ವೀರೇಂದ್ರ ಶೆಟ್ಟಿ ಬಿಗ್ ಬಾಸ್ ಮನೆಗೆ ತಿಂಡಿ, ಗಿಫ್ಟ್ ಸಮೇತ ಎಂಟ್ರಿ ಕೊಟ್ಟಾಗ ಭೂಮಿ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತರು.
 
ಅಷ್ಟೇ ಅಲ್ಲದೆ, ಇಬ್ಬರೂ ತಮ್ಮ ಭಿನ್ನಾಭಿಪ್ರಾಯ ಮರೆತು ಇನ್ನು ಮುಂದೆ ಚೆನ್ನಾಗಿರೋಣ ಎಂದು ಸಾಂತ್ವನ ಪಡಿಸಿಕೊಂಡರು. ಹೋಗುವ ಮೊದಲು ಕೈ ತುತ್ತು ತಿನ್ನಿಸಿ ಹೋದರು. ಇದನ್ನೆಲ್ಲಾ ನೋಡಿ ಮನೆಯವರ ಎಲ್ಲರ ಕಣ್ಣಲ್ಲೂ ನೀರಾಡಿತ್ತು.
ಇದರಲ್ಲಿ ಇನ್ನಷ್ಟು ಓದಿ :