ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಸೀಸನ್ ಗೆ ನಿನ್ನೆ ಸಂಜೆ ಚಾಲನೆ ಸಿಕ್ಕಿದೆ. ಈ ಬಾರಿ ಸ್ಪರ್ಧಿಗಳಾಗಿ ಹೋಗುತ್ತಾರೆಂದು ಈ ಮೊದಲು ಕೇಳಿಬರುತ್ತಿದ್ದ ಕೆಲವು ಹೆಸರುಗಳು ಸ್ಪರ್ಧಿಗಳಾಗಲೇ ಇಲ್ಲ. ಆದರೆ ಊಹಿಸದೇ ಇದ್ದವರೂ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಿದ್ದಾರೆ.ಅವರಲ್ಲಿ ಪ್ರಮುಖ ಹೆಸರೆಂದರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಪ್ರಶಾಂತ್ ಸಂಬರಗಿ ದೊಡ್ಮನೆ ಪ್ರವೇಶಿಸುತ್ತಾರೆಂದು ಯಾರೂ ಊಹಿಸಿಯೂ ಇರಲಿಲ್ಲ. ಇನ್ನು, ಹಿರಿಯ ನಟ ಶಂಕರ್