ಬಿಗ್ ಬಾಸ್ ಮನೆಯಿಂದ ಈ ವಾರ ಹೋಗುವವರು ಇವರೇ?!

ಬೆಂಗಳೂರು| Krishnaveni K| Last Modified ಭಾನುವಾರ, 4 ಏಪ್ರಿಲ್ 2021 (09:11 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಐದನೇ ವಾರದಲ್ಲಿ ಮನೆಯಿಂದ ಎಲಿಮಿನೇಟ್ ಆಗುವವರು ಯಾರು ಎಂಬ ಬಗ್ಗೆ ವೀಕ್ಷಕರು ಚರ್ಚೆ ನಡೆಸಿದ್ದಾರೆ.

 
ಈ ವಾರ ನಾಮಿನೇಟ್ ಆದವರಲ್ಲಿ ಇಬ್ಬರು ಮಾತ್ರ ಮಹಿಳಾ ಸ್ಪರ್ಧಿಗಳು. ಉಳಿದಂತೆ ಎಲ್ಲರೂ ಪುರುಷ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಪುರುಷ ಸ್ಪರ್ಧಿಗಳೇ ಈ ವಾರ ಎಲಿಮಿನೇಟ್ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
 
ಇವರಲ್ಲಿ ಶಂಕರ್ ಅಶ್ವತ್ಥ್ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ತಮ್ಮ ದೈಹಿಕ ಸಾಮರ್ಥ್ಯದಿಂದಾಗಿ ಶಂಕರ್ ಅಶ್ವತ್ಥ್ ಗೆ ಟಾಸ್ಕ್ ನ ವಿಚಾರದಲ್ಲಿ ಹೆಚ್ಚು ಆಡಲು ಸಾಧ್ಯವಾಗುತ್ತಿಲ್ಲ. ಅವರು ಹೆಚ್ಚು ಮನರಂಜನೆಯೂ ನೀಡುತ್ತಿಲ್ಲ. ಅದಲ್ಲದೆ, ಈ ವಾರ ಅವರ ಮೇಲೆ ಸಹಸ್ಪರ್ಧಿಗಳ ಅಸಮಾಧಾನವೂ ಹೆಚ್ಚಾಗಿದೆ. ಹೀಗಾಗಿ ಅವರ ಹೆಸರು ಎಲಿಮಿನೇಟ್ ಪಟ್ಟಿಯಲ್ಲಿ ಜೋರಾಗಿ ಕೇಳಿಬರುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :