ಬಿಗ್ ಬಾಸ್ ಕನ್ನಡ: ಕುಚುಕು ಗೆಳೆಯನ ಹಿಂದಿಕ್ಕಿ ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿ

ಬೆಂಗಳೂರು| Krishnaveni| Last Modified ಸೋಮವಾರ, 29 ಜನವರಿ 2018 (05:58 IST)
ಬೆಂಗಳೂರು: ರಿಯಾಲಿಟಿ ಶೋ ವಿನ್ನರ್ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರ್ಯಾಪರ್ ಚಂದನ್ ಶೆಟ್ಟಿ ವಿನ್ನರ್ ಆಗಿದ್ದು, ಕಾಮನ್ ಮ್ಯಾನ್ ದಿವಾಕರ್ ರನ್ನರ್ ಆಗಿದ್ದಾರೆ.

ನಿನ್ನೆ ನಡೆದ ಫೈನಲ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ವಿಜೇತರ ಹೆಸರು ಬಹಿರಂಗಪಡಿಸಿದ್ದಾರೆ. ಅಂತಿಮವಾಗಿ ಜೆಕೆ ಎಲಿಮಿನೇಟ್ ಆದರು.ಒಟ್ಟು ಐವರು ಫೈನಲಿಸ್ಟ್ ಗಳ ಪೈಕಿ ಶ್ರುತಿಗೆ ಐದನೇ ಸ್ಥಾನ, ನಿವೇದಿತಾ ಗೌಡಗೆ ನಾಲ್ಕನೇ ಸ್ಥಾನ, ಜಯರಾಮ್ ಕಾರ್ತಿಕ್ ಮೂರನೆಯವರಾಗಿ ಮನೆಯಿಂದ ಹೊರಬಂದರು. ಬಿಗ್ ಬಾಸ್ ಮನೆಯೊಳಗಿದ್ದಷ್ಟೂ ದಿನ ಗೆಳೆಯರಾಗಿಯೇ ಇದ್ದ ಚಂದನ್ ಮತ್ತು ದಿವಾಕರ್ ನಡುವೆ ವಿನ್ನರ್ ಯಾರೆಂದು ತೀರ್ಮಾನಿಸಲಾಯಿತು.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :