ಬೆಂಗಳೂರು: ಬಿಗ್ ಬಾಸ್ 8 ನೇ ಆವೃತ್ತಿ ಮುಗಿದ ಬಳಿಕ ವೀಕ್ಷಕರನ್ನು ಮನರಂಜಿಸಲು ಧಾರವಾಹಿ ಕಲಾವಿದರನ್ನಿಟ್ಟುಕೊಂಡು ಕಲರ್ಸ್ ವಾಹಿನಿ ಮಿನಿ ಬಿಗ್ ಬಾಸ್ ಸೀಸನ್ ಆರಂಭಿಸಿತ್ತು. ಆರಂಭದಲ್ಲಿ ಇದು ಕೇವಲ ಆರು ದಿನಗಳ ಶೋ ಎಂದಿದ್ದರೂ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಎರಡು ವಾರಕ್ಕೆ ವಿಸ್ತರಿಸಲಾಯಿತು.ಈ ವಾರ ಅಂತೂ ಮಿನಿ ಸೀಸನ್ ಗೆ ತೆರೆ ಬೀಳುವ ಸಮಯ ಬಂದಿದೆ. ಕಿಚ್ಚ ಸುದೀಪ್ ನಿರೂಪಕರಾಗಿ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಪ್ರತಿಯೊಬ್ಬ ಕಲಾವಿದರನ್ನೂ ಮಾತನಾಡಿಸಿ