ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ದೊಡ್ಡ ವಿಕೆಟ್ ಉರುಳಿದೆ. ಈ ಬಾರಿಯ ವಿನ್ನರ್ ಆಗಬಹುದು ಎಂದೇ ಲೆಕ್ಕಾಚಾರ ಹಾಕಿದ್ದ ಸ್ಪರ್ಧಿ ರಾಜೀವ್ ಎಲಿಮಿನೇಟ್ ಆಗಿದ್ದಾರೆ. ಇದು ವೀಕ್ಷಕರಿಗೆ ದೊಡ್ಡ ಶಾಕ್. ಅಷ್ಟಕ್ಕೂ ರಾಜೀವ್ ಎಲಿಮಿನೇಟ್ ಆಗುವುದಕ್ಕೆ ಕಾರಣವೇನು? ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಣೆ ನಡೆಸಿದ್ದು, ಅತಿಯಾದ ಕಾನ್ಫಿಡೆನ್ಸ್ ಹೊಂದಿದ್ದೇ ಅವರಿಗೆ ಮುಳುವಾಯ್ತು ಎಂದಿದ್ದಾರೆ.ಕಳೆದ ವಾರ ಕ್ಯಾಪ್ಟನ್ ಅರವಿಂದ್ ರಾಜೀವ್ ರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.