ಬಿಗ್ ಬಾಸ್ ಮನೆಯಿಂದ ಹೊರಬಿದ್ದ ರಾಜು ತಾಳಿಕೋಟೆ ನೋಡಿ ಮನೆಯವರ ಕಣ್ಣೀರು

ಬೆಂಗಳೂರು| Krishnaveni K| Last Modified ಸೋಮವಾರ, 16 ಡಿಸೆಂಬರ್ 2019 (09:04 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋದ ಸ್ಪರ್ಧಿ ರಾಜು ತಾಳಿಕೋಟೆ. ಮನೆಯ ಹಿರಿಯ ಸದಸ್ಯನ ನಿರ್ಗಮನ ನಿಜಕ್ಕೂ ಮನೆಯ ಇತರ ಸದಸ್ಯರಿಗೆ ಶಾಕ್ ನೀಡಿದೆ.

 
ರಾಜು ತಾಳಿಕೋಟೆ ಎಲಿಮಿನೇಟ್ ಆದ ಸುದ್ದಿ ತಿಳಿದ ಮನೆಯ ಇತರ ಸದಸ್ಯರು ಅವರನ್ನು ಕಣ್ಣೀರು ಹಾಕುತ್ತಲೇ ಬೀಳ್ಕೊಟ್ಟಿದ್ದಾರೆ.
 
ಇತ್ತ ವೀಕ್ಷಕರೂ ಕೂಡಾ ರಾಜು ತಾಳಿಕೋಟೆ ನಿರ್ಗಮಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ತುಂಬಾ ಹೃದಯವಂತ. ಇನ್ನೂ ಸ್ವಲ್ಪ ದಿನ ಮನೆಯಲ್ಲಿರಬೇಕಿತ್ತು. ಅವರ ಬದಲು ಮನೆಯಲ್ಲಿ ಡವ್ ಮಾಡಿಕೊಂಡು ಇರುವ ಬೇರೆ ಸದಸ್ಯರಿದ್ದರು. ಅವರನ್ನು ಹೊರಕಳುಹಿಸಬಹುದಿತ್ತು ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಏನೇ ಆದರೂ ರಾಜು ತಾಳಿಕೋಟೆ ಬಿಗ್ ಬಾಸ್ ಜರ್ನಿ ಇಲ್ಲಿಗೆ ಮುಕ್ತಾಯವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :