ಬೆಂಗಳೂರು: ಕೊರೋನಾ ಕಾರಣದಿಂದಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋವನ್ನು ಅರ್ಧಕ್ಕೇ ರದ್ದು ಮಾಡಲಾಗಿದೆ. ಈ ಕಾರಣಕ್ಕೆ ಇಂದು ಸ್ಪರ್ಧಿಗಳನ್ನು ಹೊರ ಕರೆತರಲಾಗುತ್ತದೆ.ಟೆಲಿವಿಷನ್ ಅಸೋಸಿಯೇಷನ್ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಭಾರವಾದ ಮನಸ್ಸಿನಿಂದ, ಅನಿವಾರ್ಯವಾಗಿ ಶೋ ಅರ್ಧಕ್ಕೇ ನಿಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.ಅಲ್ಲದೆ, ಇಂದು ಸ್ಪರ್ಧಿಗಳನ್ನು ಹೊರ ಕರೆಯಲಾಗುತ್ತದೆ. ನಂತರ ಸ್ಪರ್ಧಿಗಳನ್ನು ಮತ್ತು