ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಮನೆಯ ಎಲ್ಲಾ ಸದಸ್ಯರ ಬಗ್ಗೆ, ಅವರ ವೃತ್ತಿ ಬಗ್ಗೆ ಕಾಮೆಂಟ್ ಮಾಡುವ ಸಂಯುಕ್ತಾ ಹೆಗ್ಡೆಗೆ ದಿವಾಕರ್ ಕೊಟ್ಟ ಮಾತಿನೇಟು ನಿನ್ನೆಯ ದಿನ ಹೈಲೈಟ್ ಆಗಿತ್ತು. ದಿವಾಕರ್ ಮತ್ತು ಸಮೀರ್ ಆಚಾರ್ಯ ಬೆಡ್ ಮೇಲೆ ಕುಳಿತಿದ್ದಾಗ ಬಂದ ಸಂಯುಕ್ತಾಗೆ, ದಿವಾಕರ್ ನಿಮ್ಮನ್ನು ನೋಡಿದ್ರೆ ಹೀರೋಯಿನ್ ಅಂತನೇ ಅನಿಸಲ್ಲ. ಯಾವುದೋ ಟಿವಿ ಜಾಹೀರಾತಿನಲ್ಲಿ ಬರುವವರ ಹಾಗಿದ್ದೀರಾ. ಸಣ್ಣಕ್ಕಿದ್ದೀರಾ. ಮೇಕಪ್ ಇಲ್ಲದೇ ಹೀರೋಯಿನ್ ಥರಾ ಕಾಣಿಸೋದೇ ಇಲ್ಲ.