ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಸ್ಪರ್ಧೆ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಏಳು ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ.ಈ ವಾರ ಬಹಿರಂಗವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿತ್ತು. ಇದರಲ್ಲಿ ನಾಮಿನೇಟ್ ಮಾಡಿದ ಹೆಸರಿನವರ ಫೋಟೋಗಳನ್ನು ಅವರ ಎದುರಲ್ಲೇ ಬೆಂಕಿಗೆ ಹಾಕಲು ಹೇಳಲಾಗಿತ್ತು. ಇದರಿಂದಾಗಿ ಮನೆಯ ಸದಸ್ಯರ ಮುಖದಲ್ಲಿ ಪರಸ್ಪರ ಅಸಮಾಧಾನಗಳು ಸ್ಪಷ್ಟವಾಗಿತ್ತು.ಈ ವಾರ ನಾಮಿನೇಟ್ ಆದವರೆಂದರೆ ಪ್ರಿಯಾಂಕ, ರಾಜು ತಾಳಿಕೋಟೆ, ಚೈತ್ರಾ ವಾಸುದೇವ್,