ಬೆಂಗಳೂರು: ಕೊರೋನಾದಿಂದಾಗಿ ಈ ಬಾರಿ ಬಿಗ್ ಬಾಸ್ ಕನ್ನಡ ಶೋ ನಡೆಯುತ್ತದೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳಿತ್ತು. ಆ ಬಗ್ಗೆ ಇದೀಗ ಸ್ಪಷ್ಟನೆ ಕೊಟ್ಟಿದೆ. ಕನ್ನಡ ಬಿಗ್ ಬಾಸ್ ಶೋ ಈ ಬಾರಿ ಬರುವುದು ಖಂಡಿತಾ. ಆದರೆ ಕೊಂಚ ತಡವಾಗಿ ಬರಬಹುದು. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ನವಂಬರ್ ವೇಳೆಗೆ ಸ್ಪರ್ಧಿಗಳನ್ನು ಅಂತಿಮಗೊಳಿಸಿ, ಈ ವರ್ಷದೊಳಗಾಗಿ ಶೋ ನಡೆಸಲು ಸಿದ್ಧತೆ