ಈ ವಾರ ಬಿಗ್ ಬಾಸ್ ನ ಬಿಗ್ ವಿಕೆಟ್ ಡೌನ್?

ಬೆಂಗಳೂರು| Krishnaveni K| Last Modified ಭಾನುವಾರ, 18 ಜುಲೈ 2021 (11:40 IST)
ಬೆಂಗಳೂರು: ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನ ಸೆಕೆಂಡ್ ಇನಿಂಗ್ಸ್ ನಲ್ಲಿ ಈ ವಾರ ಮೂರನೇ ಸ್ಪರ್ಧಿ ಹೊರಹೋಗುವ ಸಮಯ. ಈ ವಾರ ಮನೆಯಿಂದ ಹೊರಹೋಗುವವರು ಯಾರು ಎಂಬ ಕುತೂಹಲ ಎಲ್ಲರಲ್ಲಿದೆ.
 > ಯಾಕೆಂದರೆ ಈ ವಾರ ನಾಮಿನೇಟ್ ಆದವರೆಲ್ಲರೂ ಘಟಾನುಘಟಿಗಳೇ. ಪ್ರಿಯಾಂಕ ತಿಮ್ಮೇಶ್, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ ಮತ್ತು ಶುಭಾ ಪೂಂಜಾ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಯಾರೇ ಹೋದರೂ ಬಿಗ್ ವಿಕೆಟ್ ಬಿದ್ದ ಹಾಗೇ.>   ಈ ಪೈಕಿ ಈಗ ಪ್ರಿಯಾಂಕಾ ತಿಮ್ಮೇ಼ಶ್ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಇಂದು ಕಿಚ್ಚ ಸುದೀಪ್ ಅಧಿಕೃತವಾಗಿ ತಮ್ಮ ಶೋನಲ್ಲಿ ಪ್ರಕಟಿಸಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :