ಬೆಂಗಳೂರು: ಬಿಗ್ ಬಾಸ್ ವಿನ್ನರ್ ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸ್ನೇಹಿತ ಲೋಕಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದ ಪ್ರಥಮ್ ಮಾಡಿದ್ದೆಲ್ಲವೂ ನಾಟಕವೇ ಎಂಬ ಅನುಮಾನಗಳು ಬಲವಾಗಿದೆ. ಆತನ ಕೆಲವು ಸ್ನೇಹಿತರೇ ಹೇಳುವಂತೆ ಪ್ರಥಮ್ ಆರೋಗ್ಯವಾಗಿದ್ದಾನೆ. ಆತ ತೆಗೆದುಕೊಂಡಿದ್ದು, ಕೇವಲ ಎರಡೇ ನಿದ್ರೆ ಮಾತ್ರೆ. ಜನರ ಅನುಕಂಪ ಗಳಿಸಲು ಈ ರೀತಿ ನಾಟಕ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ ಎಂದು ಖಾಸಗಿ ವಾಹಿನಿಗಳು ವರದಿ