ಬಿಗ್ ಬಾಸ್ ರಿಯಾಲಿಟಿ ಶೋ ಇರೋದೆ ಕಿರಿಕ್ ಪಾರ್ಟಿಗಳಿಗೆ. ಅದರಲ್ಲೂ ಟಿಆರ್ಪಿ ತಂದುಕೊಡುವ ಅಭ್ಯರ್ಥಿಗಳೆಂದರೆ ಈ ಶೋಗೆ ಅಚ್ಚುಮೆಚ್ಚು. ಶೋ ಉದ್ದಕ್ಕೂ ಕಿರಿಕಿರಿ ಮಾಡುತ್ತಲೇ ಬಂದಿದ್ದ ಸ್ಪರ್ಧಿಯೊಬ್ಬ ಕೆಟ್ಟ ವರ್ತನೆಗೆ ಬೇಸತ್ತು ಅವರನ್ನು ಹೊರಗೆ ಕಳುಸಿರುವ ಘಟನೆ ಹಿಂದಿ ಬಿಗ್ ಬಾಸ್ ನಲ್ಲಿ ನಡೆದಿದೆ. ಸಾಮಾನ್ಯವಾಗಿ ಈ ಶೋ ನಿರೂಪಕರಾದ ಸಲ್ಮಾನ್ ಖಾನ್ ಯಾವತ್ತೂ ಬೇಸರ ಮಾಡಿಕೊಂಡಿದ್ದಾಗಲಿ, ಕೋಪಗೊಂಡಿದ್ದಾಗಲಿ ನಡೆದಿರಲಿಲ್ಲ. ಆದರೆ ನಿನ್ನೆ ಮಾತ್ರ ಸ್ಪರ್ಧಿಯೊಬ್ಬರ ವಿರುದ್ಧ ಕೆಂಡಾಮಂಡಲವಾದ