ಬೆಂಗಳೂರು: ಕಿರುತೆರೆಯ ಫೇವರಿಟ್ ಜೋಡಿ ಚಂದನ್ ಕುಮಾರ್-ಕವಿತಾ ಗೌಡ ಸದ್ಯದಲ್ಲಿಯೇ ಮದುವೆಯಾಗುತ್ತಾರೆ, ಇವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬಿತ್ಯಾದಿ ರೂಮರ್ ಗಳಿಗೆ ಚಂದನ್ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ. ಕವಿತಾ-ಚಂದನ್ ಇತ್ತೀಚೆಗೆ ಗೆಳೆಯರೊಂದಿಗೆ ಟ್ರಕ್ಕಿಂಗ್ ಮಾಡಿದ್ದು, ಫೋಟೋ ಶೂಟ್ ಮಾಡಿದ್ದನ್ನೆಲ್ಲಾ ನೋಡಿದ ಕೆಲವರು ಇವರು ಲವ್ ಮಾಡುತ್ತಿದ್ದಾರೆ ಎಂದೇ ಅಂದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಅವರು ಮದುವೆಯಾಗಿದ್ದಾರೆ ಎಂದೇ ಸುದ್ದಿಹಬ್ಬಿದೆ.ಹೀಗಾಗಿ ಚಂದನ್ ಕವಿತಾ ಜತೆಗಿನ ಡ್ಯಾನ್ಸ್ ವಿಡಿಯೋ ಒಂದನ್ನು ಪ್ರಕಟಿಸಿ ನಾವು ಫ್ರೆಂಡ್ಸ್