ಬೆಂಗಳೂರು: ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿಯ ನಾಲ್ಕನೇ ವಾರದ ಅಂತ್ಯಕ್ಕೆ ನಟಿ ಚಂದ್ರಕಲಾ ಮೋಹನ್ ಎಲಿಮಿನೇಟ್ ಆಗಿದ್ದಾರೆ.ಆದರೆ ಇದಕ್ಕೆ ನೆಟ್ಟಿಗರು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಚಂದ್ರಕಲಾ ಮನೆಯೊಳಗೆ ತಮ್ಮ ವಯಸ್ಸಿಗೂ ಮೀರಿ ಒಳ್ಳೆಯ ಪ್ರದರ್ಶನ ಕೊಟ್ಟಿದ್ದರು. ಹಾಗಿದ್ದರೂ ಅವರನ್ನೇ ಹೊರಹಾಕಿದ್ದೇಕೆ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.ಅಷ್ಟೇ ಅಲ್ಲದೆ, ಇದುವರೆಗೆ ನಾಲ್ಕೂ ವಾರಗಳಲ್ಲಿ ಕೇವಲ ಮಹಿಳಾ ಸ್ಪರ್ಧಿಗಳೇ ಎಲಿಮಿನೇಟ್ ಆಗಿದ್ದಾರೆ. ಹಿರಿಯ ನಟ ಶಂಕರ್ ಅಶ್ವತ್ಥ್ ಟಾಸ್ಕ್