ಈ ವಾರಂತ್ಯಕ್ಕೆ ಮಜಾ ಟಾಕೀಸ್ ನಲ್ಲಿ ಚಿರಂಜೀವಿ ಸರ್ಜಾ ಸ್ಪೆಷಲ್

ಬೆಂಗಳೂರು| Krishnaveni K| Last Modified ಗುರುವಾರ, 15 ಅಕ್ಟೋಬರ್ 2020 (10:03 IST)
ಬೆಂಗಳೂರು: ಇತ್ತೀಚೆಗಷ್ಟೇ ಅಗಲಿದ ನಟ, ಸ್ನೇಹಿತ ಚಿರಂಜೀವಿ ಸರ್ಜಾಗೆ ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ಗೌರವ ಸಮರ್ಪಿಸಲಿದ್ದಾರೆ.
 

ಅಕ್ಟೋಬರ್ 17 ರಂದು ಮಜಾ ಟಾಕೀಸ್ ನಲ್ಲಿ ಚಿರಂಜೀವಿ ಸರ್ಜಾ ಭಾಗವಹಿಸಿದ್ದ ಸಂಚಿಕೆಯ ಪುನರ್ ಪ್ರಸಾರವಾಗಲಿದೆ. ಅಂದು ಚಿರು ಬರ್ತ್ ಡೇ ಆಗಿದ್ದು, ಈ ದಿನವನ್ನು ಸೃಜನ್ ವಿಶೇಷ ರೀತಿಯಲ್ಲಿ ಚಿರು ಸ್ಮರಣೆ ಮಾಡಲಿದ್ದಾರೆ. ಇನ್ನು, ಚಿರು ಬರ್ತ್ ಡೇ ದಿನಕ್ಕೆ ಅವರ ಅಭಿನಯದ ಕೊನೆಯ ಸಿನಿಮಾ ರಾಜ ಮಾರ್ತಂಡ ಸಿನಿಮಾದ ಹಾಡಿನ ವಿಡಿಯೋ ಒಂದು ಲಾಂಚ್ ಆಗಲಿದೆ.  ಈ ಮೂಲಕ ಚಿರು ಇಲ್ಲದೇ ಹೋದರೂ ಅವರ ಬರ್ತ್ ಡೇ ವಿಶೇಷವಾಗಿರಲಿದೆ.
ಇದರಲ್ಲಿ ಇನ್ನಷ್ಟು ಓದಿ :