ಸಿಎಂ ಸಿದ್ದರಾಮಯ್ಯ ಕನ್ನಡದ ಜನಪ್ರಿಯ ವೀಕೆಂಡ್ ವಿತ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿಎಂ ಜೀವನಗಾಥೆ ಕುರಿತಾದ ಎಪಿಸೋಡ್ ಇಂದು ಪ್ರಸಾರವಾಗುತ್ತಿದೆ. ಸಿಎಂ ಅವರೇ ಹೇಳಿರುವ ರೀತಿ ಅವರ ಜೀವನವನ್ನ ಮತ್ತೊಮ್ಮೆ ನೋಡುವ ಅವಕಾಶ ಈ ಕಾರ್ಯಕ್ರಮದ ಮೂಲಕ ಸಿಕ್ಕಿದ್ದು, ಬಾಲ್ಯ, ವಿದ್ಯಾಭ್ಯಾಸ, ಕುಟುಂಬ, ರಾಜಕೀಯದಲ್ಲಿ ಕಾಲೆಳೆದವರು, ಬೆನ್ನೆಲುಬಾದವರ ಬಗ್ಗೆ ಹೇಳಿಕೊಂಡಿದ್ದಾರೆ.ಅದರಲ್ಲೂ ಇತ್ತೀಚೆಗೆ ಅವರ ಪುತ್ರ ವಿದೇಶಕ್ಕೆ ತೆರಳಿ ಸಾವನ್ನಪ್ಪಿದ ಬಗ್ಗೆ ನೋವನ್ನ ತೋಡಿಕೊಂಡಿದ್ದಾರೆ. ವಿದೇಶಕ್ಕೆ ತೆರಳುವಾಗ ಆರೋಗ್ಯ ಸರಿ ಇಲ್ಲವೆಂದು ನನಗೆ