ಬೆಂಗಳೂರು: ಮೂರೇ ವಾರದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆದುಕೊಂಡಂತಿದೆ. ದಯಾಳ್ ಪದ್ಮನಾಭ್ ಬಿಗ್ ಬಾಸ್ ಮನೆಯಿಂದ ಮೂರನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಬರೋಕು ಮೊದಲು ಕೆಲವರ ಜತೆ ಸಿಕ್ಕಾಪಟ್ಟೆ ಜಗಳವಾಡಿಕೊಂಡರೆ, ಇನ್ನು ಕೆಲವರ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ಅನುಪಮಾ ಹಾಗೂ ದಯಾಳ್ ನಡುವೆ ಕೊಂಚ ಹೆಚ್ಚೇ ಆತ್ಮೀಯತೆ ಬೆಳೆದುಕೊಂಡಿತ್ತು. ದಯಾಳ್ ಮನೆಯಿಂದ ಹೊರಹೋಗುವ ವೇಳೆ ಎಲ್ಲರೂ ಭಾವುಕರಾದ್ರೆ, ಅನುಪಮಾ ಕೊಂಚ ಹೆಚ್ಚಿಗೆ ಭಾವುಕರಾಗಿ ಕಣ್ಣೀರು