ನವದೆಹಲಿ: ಒಂದು ಕಾಲದಲ್ಲಿ ಟಿವಿ ಎಂದರೆ ದೂರದರ್ಶನ ಮಾತ್ರ ಎಂಬ ಕಾಲವಿತ್ತು. ಆಗ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ಧಾರವಾಹಿಗಳನ್ನು ಜನರು ಹೆಚ್ಚು ಕಡಿಮೆ ಆರಾಧಕರಂತೆ ವೀಕ್ಷಿಸುತ್ತಿದ್ದರು. ಇದೀಗ ಆ ಎರಡೂ ಧಾರವಾಹಿಗಳನ್ನು ದೂರದರ್ಶನ ಮತ್ತೆ ಪ್ರಸಾರ ಮಾಡಲು ಪ್ರಾರಂಭಿಸಿದ್ದು, ಜನ ಅಂದಿನಷ್ಟೇ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ರಾಮಾಯಣ, ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಡಿಡಿ ಭಾರತಿಯಲ್ಲಿ ಮಹಾಭಾರತ ಧಾರವಾಹಿ ಪ್ರಸಾರವಾಗಲಿದೆ.ಈ ಸುದ್ದಿ