ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಮೊದಲ ವಾರವೇ ನಾಮಿನೇಟ್ ಆಗಿ ಕಡಿಮೆ ವೋಟ್ ಪಡೆದು ದೊಡ್ಮನೆಯಿಂದ ಹೊರಬಂದಿರುವ ಸ್ಪರ್ಧಿ ಧನುಶ್ರೀ. ನಿನ್ನೆ ಕಿಚ್ಚ ಸುದೀಪ್ ಮನೆಯವರ ಜೊತೆಗೆ ಸಂವಾದ ನಡೆಸಿದ ಬಳಿಕ ಕೊನೆಯಲ್ಲಿ ಈ ವಾರ ಹೊರಬರುತ್ತಿರುವ ಸ್ಪರ್ಧಿ ಯಾರು ಎಂದು ಘೋಷಿಸಿದ್ದಾರೆ. ಇನ್ನು, ಮೊದಲ ವಾರವೇ ಹೊರಬರುತ್ತಿರುವ ನಿರಾಸೆಯಲ್ಲಿ ಧನುಶ್ರೀ ಕಣ್ಣೀರು ಹಾಕಿದರು.ಆದರೆ ಒಂದೇ ವಾರದಲ್ಲಿ ಅವರು ಟ್ರೋಲ್ ಪೇಜ್ ಗಳ ಸ್ಟಾರ್ ಆಗಿದ್ದರು. ಮೇಕಪ್