ವೀಕೆಂಡ್ ವಿತ್ ರಮೇಶ್ ಬಗ್ಗೆ ಜನರಿಗೆ ಭ್ರಮನಿರಸ! ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಬೆಂಗಳೂರು, ಮಂಗಳವಾರ, 14 ಮೇ 2019 (07:36 IST)

ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜನರಿಗೆ ಮೂಡಿಸಿದ್ದ ಕುತೂಹಲಕ್ಕೆ ತಕ್ಕ ಪ್ರದರ್ಶನ ಕಾಣುವಲ್ಲಿ ವಿಫಲವಾಗಿದೆ.


 
ಕಾರಣ ಮೊದಲ ಎಪಿಸೋಡ್ ನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಕರೆಸಿದ್ದು ಬಿಟ್ಟರೆ, ಉಳಿದೆಲ್ಲಾ ಎಪಿಸೋಡ್ ನಲ್ಲಿ ಸಿನಿಮಾ ಕಲಾವಿದರನ್ನು ಮಾತ್ರ ಕರೆಸಿ ಸಾಧಕರೆಂದು ಪರಿಚಯಿಸಲಾಗುತ್ತಿದೆ.
 
ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕರೆಸುತ್ತಿಲ್ಲ ಎನ್ನುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರೇಮಾ, ರಾಘವೇಂದ್ರ ರಾಜ್ ಕುಮಾರ್, ಪ್ರಕಾಶ್ ಬೆಳವಾಡಿ, ಶಶಿ ಕುಮಾರ್, ವಿನಯ್ ಪ್ರಸಾದ್ ಬಳಿಕ ಈ ವಾರವಾದರೂ ಸಿನಿಮೇತರ ಕ್ಷೇತ್ರದ ಸಾಧಕರು ಬರಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.
 
ಈ ವಾರ ಉಗ್ರಂ ಸಿನಿಮಾ ಖ್ಯಾತಿಯ ಶ್ರೀ ಮುರಳಿ ಸಾಧಕರ ಸೀಟ್ ನಲ್ಲಿ ಕೂರುತ್ತಿರುವುದು ಅಭಿಮಾನಿಗಳಿಗೆ ಭ್ರಮನಿರಸವುಂಟು ಮಾಡಿದೆ. ಹೀಗೇ ಆದರೆ ಕಾರ್ಯಕ್ರಮದ ಟಿಆರ್ ಪಿ ಇಳಿಯುವುದು ಖಂಡಿತಾ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇಷ್ಟು ದಿನ ಸೈಲೆಂಟ್ ಆಗಿದ್ದ ದುನಿಯಾ ವಿಜಿ ಹೊಸ ಸುದ್ದಿಯೊಂದಿಗೆ ಪ್ರತ್ಯಕ್ಷ

ಬೆಂಗಳೂರು: ವೈಯಕ್ತಿಕ ಜೀವನದ ವಿವಾದಗಳಲ್ಲೇ ಮುಳುಗಿ ಹೋಗಿದ್ದ ದುನಿಯಾ ವಿಜಯ್ ಇದೀಗ ಮತ್ತೆ ಸಿನಿಮಾ ಮೂಲಕ ...

news

ಅಣ್ಣಾವ್ರ ಮನೆಯಲ್ಲಿ ಮದುವೆ ತಯಾರಿ ಜೋರು

ಬೆಂಗಳೂರು: ಡಾ. ರಾಜ್ ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ...

news

ಸಚಿವ ಸಿಎಸ್ ಪುಟ್ಟರಾಜುಗೆ ನಿಖಿಲ್ ಎಲ್ಲಿದ್ದೀಯಪ್ಪಾ ಪಿಕ್ಚರ್ ಮಾಡುವಾಸೆಯಂತೆ!

ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸಿಎಂ ಕುಮಾರಸ್ವಾಮಿ ...

news

ಕೆಜಿಎಫ್ 2 ನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ ಹೀಗಿರಲಿದೆ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದಲ್ಲೂ ಯಶ್ ದಾಡಿ ಬಿಟ್ಟುಕೊಂಡಿರುತ್ತಾರಾ? ...