WD ಬೆಂಗಳೂರು: ಕನ್ನಡ ಕಿರುತೆರೆ ಧಾರವಾಹಿಗಳು ಈಗ ಯಾವ ಸಿನಿಮಾಗೂ ಕಮ್ಮಿಯಿಲ್ಲ ಎನ್ನುವ ರೀತಿ ಜನಪ್ರಿಯವಾಗಿದೆ. ಆದರೆ ಹೆಚ್ಚಿನ ಧಾರವಾಹಿಗಳಲ್ಲಿ ಈಗ ಸಿನಿಮಾ ಕತೆಗಳನ್ನೇ ನಕಲು ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಉದಾಹರಣೆಗೆ ಗಟ್ಟಿಮೇಳ ಧಾರವಾಹಿಯಲ್ಲಿ ಈಗ ಮಂಜುನಾಥ್ ಮತ್ತು ಮಗಳು ಅಂಜಲಿ ಮೇಲೆ ಕೊಲೆ ಆರೋಪವಿದ್ದು, ಅದರಿಂದ ರಕ್ಷಿಸಿಕೊಳ್ಳಲು ಅವರು ಮಾಡುತ್ತಿರುವ ಪ್ರಯತ್ನ ದೃಶ್ಯಂ ಸಿನಿಮಾವನ್ನು ನೆನಪಿಸುವಂತಿದೆ. ಹೀಗಾಗಿ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ದೃಶ್ಯಂ ಕತೆ ನಕಲು ಮಾಡಿದ್ದೀರಿ