Widgets Magazine

ನಂ.1 ಸ್ಥಾನ ಕಳೆದುಕೊಂಡ ಗಟ್ಟಿಮೇಳ ಧಾರವಾಹಿ: ಟಾಪ್ 1 ಧಾರವಾಹಿ ಯಾವುದು ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 31 ಜುಲೈ 2020 (10:58 IST)
ಬೆಂಗಳೂರು: ಕಿರುತೆರೆಯಲ್ಲಿ ಯುವ ಜನರ ಮನಸ್ಸು ಗೆದ್ದ ಜೀ ಕನ್ನಡ ವಾಹಿನಿಯ ಗಟ್ಟಿಮೇಳ ಧಾರವಾಹಿ ಹಲವು ದಿನಗಳಿಂದ ನಂ.1 ಸ್ಥಾನದಲ್ಲಿತ್ತು. ಆದರೆ ಈ ವಾರದ ಟಿಆರ್ ಪಿ ರ್ಯಾಂಕಿಂಗ್ ನಲ್ಲಿ ಧಾರವಾಹಿ ನಂ.1 ಪಟ್ಟ ಕಳೆದುಕೊಂಡಿದೆ.

 
ಮತ್ತೆ ಜೊತೆ ಜೊತೆಯಲಿ ಧಾರವಾಹಿ ನಂ.1 ಸ್ಥಾನಕ್ಕೇರಿದೆ. ಪ್ರಸಾರವಾದ ಮೊದಲ ವಾರದಲ್ಲೇ ನಂ.1 ಸ್ಥಾನಕ್ಕೇರಿ ದಾಖಲೆ ಮಾಡಿದ್ದ ಜೊತೆ ಜೊತೆಯಲಿ ಕೆಲವು ದಿನಗಳಿಂದ 2 ನೇ ಸ್ಥಾನದಲ್ಲಿತ್ತು.
 
ಆದರೆ ಈ ವಾರ ಗಟ್ಟಿಮೇಳ ಧಾರವಾಹಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ವಿಫಲವಾಗಿದೆ. ಹೀಗಾಗಿ ನಂ.1 ಸ್ಥಾನ ಕಳೆದುಕೊಂಡು ದ್ವಿತೀಯ ಸ್ಥಾನಕ್ಕೆ ಜಾರಿದೆ.
ಇದರಲ್ಲಿ ಇನ್ನಷ್ಟು ಓದಿ :