ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಗಟ್ಟಿಮೇಳ ಪ್ರೇಕ್ಷಕರಿಗೆ ಒಂದು ಬ್ಯಾಡ್ ನ್ಯೂಸ್.ಧಾರವಾಹಿ ಆರಂಭವಾಗಿ ನಾಲ್ಕು ವರ್ಷವೇ ಕಳೆದರೂ ಈಗಲೂ ಟಿಆರ್ ಪಿ ಪಟ್ಟಿಯಲ್ಲಿ ನಂ.1 ಅಥವಾ 2 ಸ್ಥಾನದಲ್ಲೇ ಗಟ್ಟಿಮೇಳ ಪ್ರಸಾರ ಕಾಣುತ್ತಿರುವುದು ವಿಶೇಷ. ಗಟ್ಟಿಮೇಳ ಧಾರವಾಹಿಗೆ ಅಷ್ಟೊಂದು ಫ್ಯಾನ್ ಫಾಲೋವರ್ಸ್ ಇದ್ದಾರೆ.ಕಿರುತೆರೆಯ ಜನಪ್ರಿಯ ಹೀರೋ ರಕ್ಷ್ ಮತ್ತು ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರದಲ್ಲಿರುವ ಗಟ್ಟಿಮೇಳ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು ಸದ್ಯದಲ್ಲಿಯೇ ಧಾರವಾಹಿ ಮುಕ್ತಾಯ