ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ನಟ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ವಾರದಿಂದ ವಾರಕ್ಕೆ ಕುತೂಹಲ ಮೂಡಿಸುತ್ತಿದೆ. ಈ ವಾರ ಅತಿಥಿಯಾಗಿ ಯಾರು ಬರುತ್ತಾರೆ ಎನ್ನುವುದೇ ವೀಕ್ಷಕರ ಕುತೂಹಲ. ಆದರೆ ಈ ವಾರದ ಆ ವಿಶೇಷ ಅತಿಥಿ ಯಾರು ಗೊತ್ತಾ?! ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.ಸಾಮಾನ್ಯವಾಗಿ ದೇವೇಗೌಡರು ಯಾವುದೇ ಮನರಂಜನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ, ತಮ್ಮ ಸಾರ್ವಜನಿಕವಾಗಿ ರಾಜಕೀಯ ಬಿಟ್ಟು