ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಮತ್ತೊಂದು ರೋಚಕ ಘಟ್ಟ ಎದುರಾಗುತ್ತಿದೆ. ಕೈಲಾಸದಲ್ಲಿ ತುಂಟಾಟವಾಡುತ್ತ ಜಗತ್ತಿನ ಮಾತಾ ಪಿತರಾದ ಪಾರ್ವತಿ ಪರಮೇಶ್ವರರನ್ನು ರಂಜಿಸಲು ಗಣೇಶನ ಆಗಮನವಾಗುತ್ತಿದೆ. ಇದೇ ಸೋಮವಾರ ಅಂದರೆ ಫೆ.13 ರಂದು ಗಣೇಶನ ಜನನವಾಗುತ್ತಿದ್ದು , ಸರ್ವವಿಘ್ನಗಳನ್ನು ನಿವಾರಿಸಲು ಕರುನಾಡ ಮನೆ ಮನೆಗೆ ಗಣೇಶ ಬರುತ್ತಿದ್ದಾನೆ. ಶಿವ ತಪಸ್ಸಿಗೆ ಹೋದ ಸಂದರ್ಭದಲ್ಲಿ ಪಾರ್ವತಿ ಗಣೇಶನಿಗೆ ಜನ್ಮವಿಡುತ್ತಾಳೆ ಮಹಾದೇವ ಮತ್ತೆ ಮರಳುವವರೆಗು ಕೈಲಾಸವೆಲ್ಲ ಗಣೇಶನ