ನಟಿಗೆ ಅಪಘಾತ: ಹಿಟ್ಲರ್ ಕಲ್ಯಾಣ ಧಾರವಾಹಿ ಆರಂಭಕ್ಕೇ ವಿಘ್ನ

ಬೆಂಗಳೂರು| Krishnaveni K| Last Modified ಸೋಮವಾರ, 12 ಜುಲೈ 2021 (12:50 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಜುಲೈ 19 ರಿಂದ ಆರಂಭವಾಗಬೇಕಿದ್ದ ಧಾರವಾಹಿ ಇದ್ದಕ್ಕಿದ್ದಂತೆ ಮುಂದೂಡಿಕೆಯಾಗಿದೆ.  
> ಧಾರವಾಹಿಯ ಶೂಟಿಂಗ್ ವೇಳೆ ನಾಯಕಿ ನಟಿ ಅಪಘಾತವಾಗಿ ಗಾಯಗೊಂಡಿದ್ದ ಸುದ್ದಿಯನ್ನು ವೆಬ್ ದುನಿಯಾ ಮೊನ್ನೆಯೇ ಪ್ರಕಟಿಸಿತ್ತು. ತಲೆಗೆ ಪೆಟ್ಟು ಮಾಡಿಕೊಂಡ ಕಾರಣ ನಾಯಕಿ ಪಾತ್ರಧಾರಿ ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿತ್ತು.>   ಇದೀಗ ಧಾರವಾಹಿ ಪ್ರಸಾರ ದಿನಾಂಕ ಮುಂದೂಡಿಕೆಯಾದ ಸುದ್ದಿ ಬಂದಿದೆ. ಆದರೆ ಧಾರವಾಹಿ ತಂಡ ಇದಕ್ಕೆ ಬಹಿರಂಗವಾಗಿ ಕಾರಣ ತಿಳಿಸಿಲ್ಲ. ಆದರೆ ಅಪಘಾತವೇ ಈ ಮುಂದೂಡಿಕೆಗೆ ಕಾರಣ ಎನ್ನಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :