ಮತ್ತೆ ಕಿರುತೆರೆಗೆ ಮರಳಿದ ಸೂಪರ್ ಸ್ಟಾರ್ ಜೆಕೆ!

ಬೆಂಗಳೂರು| Krishnaveni K| Last Modified ಸೋಮವಾರ, 23 ಡಿಸೆಂಬರ್ 2019 (09:06 IST)
ಬೆಂಗಳೂರು: ಅಶ್ವಿನಿ ನಕ್ಷತ್ರ ಬಳಿಕ ಬಿಗ್ ಬಾಸ್ ಶೋನಲ್ಲಿ ಕಾಣಿಸಿದ್ದು ಬಿಟ್ಟರೆ ನಟ ಜಯರಾಮ್ ಕಾರ್ತಿಕ್ ಕನ್ನಡ ಕಿರುತೆರೆಯಿಂದ ದೂರವಿದ್ದರು. ಇದೀಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ.

 

ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಜನಪ್ರಿಯ ಧಾರವಾಹಿ ನಾಗಿಣಿಯ ಎರಡನೇ ಭಾಗದಲ್ಲಿ ಜೆಕೆ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನಾಗಿಣಿಯ ಪ್ರೇಮಿಯಾಗಿ ಜೆಕೆ ಪಾತ್ರ ಮಾಡುತ್ತಿದ್ದಾರೆ.
 
ಆದರೆ ಪ್ರೋಮೋ ನೋಡಿದರೆ ಜೆಕೆ ಪಾತ್ರ ಧಾರವಾಹಿಯುದ್ಧಕ್ಕೂ ಇರುವುದು ಸಂಶಯವೆನಿಸುತ್ತದೆ. ಹಾಗಿದ್ದರೂ ಮತ್ತೆ ಜೆಕೆಯನ್ನು ಕಿರುತೆರೆಯಲ್ಲಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :