ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕಮಲಿ’ ಧಾರವಾಹಿಯಲ್ಲಿ ಈಗ ನಾಯಕಿ ಕಮಲಿ-ನಾಯಕ ರಿಶಿ ಮದುವೆ ಕತೆ ನಡೆಯುತ್ತಿದೆ. ಇದೇ ವೇಳೆ ನಿಜ ಜೀವನದಲ್ಲೂ ಕಮಲಿ ಧಾರವಾಹಿ ನಟಿಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಬಂದಿದೆ. ಕಮಲಿ ಧಾರವಾಹಿಯಲ್ಲಿ ನಾಯಕಿಯ ಗೆಳತಿಯಾಗಿ ಪಾತ್ರ ಮಾಡುತ್ತಿರುವ ‘ನಿಂಗಿ’ ಎಲ್ಲರಿಗೂ ಗೊತ್ತಿರುತ್ತದೆ. ತಿಂಡಿ ಪೋತಿಯಾಗಿ, ಕಾಮಿಡಿ ಟಚ್ ಇರುವ ಪಾತ್ರ ಮಾಡುತ್ತಿರುವ ನಟಿ ಅಂಕಿತಾ ರಿಯಲ್ ಲೈಫ್ ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಛಾಯಾಗ್ರಾಹಕ