ಬೆಂಗಳೂರು: ಕನ್ನಡ ಕಿರುತೆರೆಯನ್ನು ಲಾಕ್ ಡೌನ್ ಬಳಿಕ ಡಬ್ಬಿಂಗ್ ಧಾರವಾಹಿಗಳು ಆಕ್ರಮಿಸಿಕೊಳ್ಳುತ್ತಿವೆ. ಇದರ ಪರಿಣಾಮ ಟಿಆರ್ ಪಿ ಇಲ್ಲದ ಕನ್ನಡ ಧಾರವಾಹಿಗಳು ಒಂದೊಂದಾಗಿ ಪ್ರಸಾರ ನಿಲ್ಲಿಸುತ್ತಿವೆ.ಅದರಲ್ಲೂ ಸುವರ್ಣ ವಾಹಿನಿಯಂತೂ ತನ್ನ ಬಹುತೇಕ ಧಾರವಾಹಿಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಿ ಡಬ್ಬಿಂಗ್ ಧಾರವಾಹಿಗಳಿಗೆ ಅನುವು ಮಾಡಿಕೊಟ್ಟಿದೆ. ಇದರ ವಿರುದ್ಧ ಈಗ ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರತಿಗೊಬ್ಬ, ಕೀರುತಿಗೊಬ್ಬ ಧಾರವಾಹಿಯ ನಾಯಕ ತೇಜಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಾನೆಲ್ ವಿರುದ್ಧ ಬಹಿರಂಗ ಕಿಡಿ ಕಾರಿರುವ ತೇಜಸ್ ನಮಗೆ ಇದರ