ಬೆಂಗಳೂರು: ಕನ್ನಡದ ಜನಪ್ರಿಯ ಚಾನೆಲ್ ಗಳಾದ ಸ್ಟಾರ್ ಸುವರ್ಣ ವಾಹಿನಿ ಮತ್ತು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಮೂರು ಧಾರವಾಹಿಗಳಿಗೆ ರಾಜ್ಯ ಸರ್ಕಾರ ನೋಟೀಸ್ ಜಾರಿ ಮಾಡಿದೆ. ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ನೀಲಿ ಧಾರವಾಹಿ ಮತ್ತು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಂಗಾ ಹಾಗೂ ಅಂಜಲಿ ಧಾರವಾಹಿಗಳಲ್ಲಿ ಭೂತ, ಪ್ರೇತ ಕತೆಗಳನ್ನು ವೈಭವೀಕರಿಸುತ್ತಿರುವುದಕ್ಕೆ ನೋಟೀಸ್ ಜಾರಿ ಮಾಡಲಾಗಿದೆ. ಈ ವಿಷಯವನ್ನು ಸ್ವತಃ ಗೃಹ ಸಚಿವ ಜಿ. ಪರಮೇಶ್ವರ್ ಸದನದಲ್ಲಿ