ತವರಿಗೆ ಮರಳಿದ ಕನ್ನಡ ಧಾರವಾಹಿಗಳು

ಬೆಂಗಳೂರು| Krishnaveni K| Last Modified ಮಂಗಳವಾರ, 8 ಜೂನ್ 2021 (09:16 IST)
ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಶೂಟಿಂಗ್ ನಡೆಸಲಾಗದೇ ಎಲ್ಲಾ ವಾಹಿನಿಗಳ ಪ್ರಮುಖ ಧಾರವಾಹಿ ತಂಡಗಳು ಹೈದರಾಬಾದ್ ಗೆ ಶೂಟಿಂಗ್ ನಡೆಸಲು ತೆರಳಿದ್ದವು.

 
ಆದರೆ ರಾಜ್ಯದಲ್ಲಿ ಈಗ ಅನ್ ಲಾಕ್ ಗೆ ಸಿದ್ಧತೆ ನಡೆದಿದ್ದು, ಧಾರವಾಹಿ ಶೂಟಿಂಗ್ ಗೂ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಒಂದೊಂದೇ ಧಾರವಾಹಿ ತಂಡಗಳು ತವರಿಗೆ ಮರಳುತ್ತಿವೆ.
 
ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಜೊತೆ ಜೊತೆಯಲಿ, ಕನ್ನಡತಿ, ಗಟ್ಟಿಮೇಳ, ಪಾರು, ನಮ್ಮನೆ ಯುವರಾಣಿ ಸೇರಿದಂತೆ ಪ್ರಮುಖ ಧಾರವಾಹಿ ತಂಡಗಳು ಚಿತ್ರೀಕರಣಕ್ಕೆಂದು ತೆರಳಿದ್ದವು. ಇದೀಗ ಒಂದೊಂದಾಗಿ ತವರಿಗೆ ಮರಳುತ್ತಿವೆ. ಮುಂದಿನ ವಾರದಿಂದ ಇಲ್ಲಿಯೇ ತಮ್ಮ ಎಂದಿನ ಲೊಕೇಷನ್ ಗಳಲ್ಲಿ ಚಿತ್ರೀಕರಣ ನಡೆಸಲಿವೆ.
ಇದರಲ್ಲಿ ಇನ್ನಷ್ಟು ಓದಿ :