ಬೆಂಗಳೂರು: ಪರಸ್ಪರ ಪ್ರೀತಿಸಿ, ಕೆಲವು ದಿನಗಳ ಕಾಲ ಸಹಜೀವನ ನಡೆಸಿ ಕೈ ಕೊಟ್ಟ ಪ್ರೇಮಿ ವಿರುದ್ಧ ಕಿರುತೆರೆ ನಟಿ ಪೊಲೀಸರಿಗೆ ದೂರಿತ್ತಿದ್ದಾರೆ. ಈ ನಟಿ ಮೈಸೂರು ಮೂಲದವರೆನ್ನಲಾಗಿದೆ. ಆಕೆ ಪ್ರೀತಿಸಿದ ಯುವಕ ಖಾಸಗಿ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಉಲ್ಲಾಸ್ ಎಂದು ಗುರುತಿಸಲಾಗಿದೆ. ಕಳೆದ 8 ತಿಂಗಳಿನಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಅಲ್ಲದೆ ಬೆಂಗಳೂರಿನಲ್ಲೇ ಕಳೆದ ಎರಡು ತಿಂಗಳಿನಿಂದ ಒಂದೇ ಮನೆಯಲ್ಲಿದ್ದುಕೊಂಡು ಲಿವಿಂಗ್ ಟುಗೆದರ್ ಸಂಬಂಧವಿತ್ತು ಎಂದು ಖಾಸಗಿ