ಬೆಂಗಳೂರು: ಕೊರೋನಾ, ಲಾಕ್ ಡೌನ್ ಇಫೆಕ್ಟ್ ಕನ್ನಡ ಕಿರುತೆರೆ ಲೋಕವನ್ನು ಇನ್ನಿಲ್ಲದಂತೆ ಕಾಡಿದೆ. ಹಲವು ಧಾರವಾಹಿಗಳು ನಿಂತು ಹೋದರೆ, ಇನ್ನು ಹಲವು ಧಾರವಾಹಿಗಳು ಟಿಆರ್ ಪಿ ಗಳಿಸಲು ಒದ್ದಾಡುತ್ತಿವೆ. ಈ ನಡುವೆ ಲಾಕ್ ಡೌನ್ ನಿಂದಾಗಿ ಆರ್ಥಿಕ ನಷ್ಟದಲ್ಲಿರುವ ಕಿರುತೆರೆ ಲೋಕ ಈಗ ಕಲಾವಿದರ ವೇತನಕ್ಕೆ ಕತ್ತರಿ ಹಾಕಿದೆ. ಹೆಚ್ಚಿನ ಎಲ್ಲಾ ಧಾರವಾಹಿ ತಂಡಗಳೂ ಹೆಚ್ಚು ವೇತನ ಪಡೆಯುತ್ತಿರುವ ಕಲಾವಿದರಿಗೆ ಶೇ. 20 ರಷ್ಟು ವೇತನ ಕಡಿತ ಮಾಡುತ್ತಿದೆ.ಹಲವು ಕಲಾವಿದರು